ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ದರ ವಿವರ

0
5
ಬೆಂಗಳೂರು: ಕಳೆದ ಕೆಲ ವಾರಗಳಿಂದ ಹಂತಹಂತವಾಗಿ ಏರಿಕೆ ಕಾಣುತ್ತಲೇ ಬಂದಿದ್ದ , ಆಭರಣಪ್ರಿಯರಿಗೆ ನಿರಂತರವಾಗಿ ನಿರಾಸೆ ಮೂಡಿಸಿತ್ತು. ಈ ವಾರದಲ್ಲಿ ಆಭರಣ ಪ್ರಿಯರು ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಇಂದು ಮಂಗಳವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ₹4,591 ದಾಖಲಾಗಿದೆ.

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು (ಮಂಗಳವಾರ) ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹44,700 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹48,770 ರೂಪಾಯಿ ದಾಖಲಾಗಿದೆ.

ಬೆಳ್ಳಿ ದರ:
ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹71,600 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹71,600 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹76,000 ರೂ ನಿಗದಿಯಾಗಿದೆ.

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:ಬೆಂಗಳೂರು: ₹44,700 (22 ಕ್ಯಾರಟ್‌) ₹48,770 (24 ಕ್ಯಾರಟ್‌)
ಚೆನ್ನೈ: ₹45,200 (22 ಕ್ಯಾರಟ್‌) ₹49,310 (24 ಕ್ಯಾರಟ್‌)
ದಿಲ್ಲಿ: ₹46,100 (22 ಕ್ಯಾರಟ್‌), ₹50,100 (24 ಕ್ಯಾರಟ್‌)
ಹೈದರಾಬಾದ್‌: ₹44,700 (22 ಕ್ಯಾರಟ್‌) ₹48,770 (24 ಕ್ಯಾರಟ್‌)
ಕೋಲ್ಕತಾ: ₹46,000 (22 ಕ್ಯಾರಟ್‌), ₹49,750 (24 ಕ್ಯಾರಟ್‌)
ಮಂಗಳೂರು: ₹44,700 (22 ಕ್ಯಾರಟ್‌) ₹48,770 (24 ಕ್ಯಾರಟ್‌)
ಮುಂಬಯಿ: ₹44,910(22 ಕ್ಯಾರಟ್‌), ₹45,910 (24 ಕ್ಯಾರಟ್‌)
ಮೈಸೂರು: ₹44,700 (22 ಕ್ಯಾರಟ್‌) ₹48,770 (24 ಕ್ಯಾರಟ್‌)

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದರೆ, ಬೆಳ್ಳಿ ಬೆಲೆಯಲ್ಲೂ ಕೆಲವೆಡೆ ಏರಿಕೆಯಾಗಿ ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

LEAVE A REPLY

Please enter your comment!
Please enter your name here