ರಾಜ್ಯಕ್ಕೆ ಅರುಣ್‌ ಸಿಂಗ್‌ ಭೇಟಿ ಹಿನ್ನೆಲೆ, ಬಿಜೆಪಿಯ ಎರಡೂ ಪಾಳಯದಲ್ಲಿ ಗರಿಗೆದರಿದ ಚಟುವಟಿಕೆ

0
4
ಬೆಂಗಳೂರು: ಪಕ್ಷದ ರಾಜ್ಯ ಉಸ್ತುವಾರಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆ ಗರಿಗೆದರಿದೆ. ನಾಯಕತ್ವದ ಪರ ಹಾಗೂ ವಿರುದ್ಧವಿರುವ ಬಣಗಳ ನಡುವೆ ಒಳಗೊಳಗೇ ತಂತ್ರಗಾರಿಕೆ ಚರ್ಚೆ ನಡೆಯುತ್ತಿದೆ. ಇದರ ಭಾಗವಾಗಿ ಆಪ್ತ ಸಚಿವರು, ಶಾಸಕರು ಸಿಎಂ ಅವರನ್ನು ಸೋಮವಾರ ಭೇಟಿಯಾದರು.

ರಾಜ್ಯ ಬಿಜೆಪಿಯಲ್ಲಿ ತಲೆದೋರಿರುವ ಗೊಂದಲ ಇತ್ಯರ್ಥಕ್ಕೆ ಜೂನ್‌ 16ರ ಮಧ್ಯಾಹ್ನ ಅರುಣ್‌ ಸಿಂಗ್‌ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಜೂನ್‌ 18ರಂದು ವಾಪಸಾಗಲಿದ್ದು, ಈ ಅವಧಿಯಲ್ಲಿ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ಕೋರ್‌ ಕಮಿಟಿ ಸಭೆಯೂ ನಡೆಯಲಿದೆ. ಇದರ ಮಧ್ಯೆ ಶಾಸಕರ ಭೇಟಿಗೂ ಅವಕಾಶ ಕಲ್ಪಿಸಲಾಗಿದೆ. ಆದರೆ, ಶಾಸಕಾಂಗ ಪಕ್ಷದ ಸಭೆ ನಡೆಸುವ ಸಾಧ್ಯತೆಯನ್ನು ಸಿಂಗ್‌ ಅವರೇ ತಳ್ಳಿ ಹಾಕಿದ್ದಾರೆ.

ಸಿಎಂ ಸಂದೇಶ
ಕೋವಿಡ್‌ ನಿರ್ವಹಣೆ, ಪ್ಯಾಕೇಜ್‌ ಘೋಷಣೆ ಸೇರಿದಂತೆ ಉತ್ತಮ ಆಡಳಿತ ನೀಡುತ್ತಿರುವುದಾಗಿ ಸಿಎಂ ಪಾಳಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರವಾಸ ಪೂರೈಸಿ ಬಂದಿರುವ ಅವರು ಸೋಮವಾರವೂ ಸರಣಿ ಸಭೆ ನಡೆಸಿದ್ದಾರೆ. ಜತೆಗೆ ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದಾರೆ.

ಅರುಣ್‌ ಸಿಂಗ್‌ ಭೇಟಿಯಾದ ಬೆಲ್ಲದ್‌ದಿಲ್ಲಿ ಪ್ರವಾಸದಲ್ಲಿರುವ ಶಾಸಕ ಅರವಿಂದ ಬೆಲ್ಲದ್‌, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಸೋಮವಾರ ಭೇಟಿಯಾದರು. ಶಾಸಕರ ಅಭಿಪ್ರಾಯ ಆಲಿಸಲು ಹೆಚ್ಚು ಸಮಯ ನೀಡುವಂತೆ ಮನವಿ ಮಾಡಿಕೊಂಡರು ಎನ್ನಲಾಗಿದೆ.

LEAVE A REPLY

Please enter your comment!
Please enter your name here