ಕೇಂದ್ರ ಹಾಗೂ ರಾಜ್ಯದಲ್ಲಿ ಶಾಪಗ್ರಸ್ತ ಸರ್ಕಾರ: ದಿನೇಶ್ ಗುಂಡೂರಾವ್ ಕಿಡಿ

0
8
ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಶಾಪಗ್ರಸ್ತ ಸರ್ಕಾರವಿದೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಆರೋಪಿಸಿದರು.‌ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಶಾಪಗ್ರಸ್ತ ಸರ್ಕಾರ, ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರಗಳು ದೇಶದ ಜನರ ಪರಿಸ್ಥಿತಿಯನ್ನು ನೆಲಕಚ್ಚುವಂತೆ ಮಾಡಿದೆ ಎಂದು ಕಿಡಿಕಾರಿದರು.

ಜನರ ಗಾಯದ ಮೇಲೆ ಬರೆ ಹಾಕುವಂತಹಾ ನಿರ್ಧಾರ ಮಾಡುತ್ತಿದೆ. ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮೋದಿ ಸರ್ಕಾ ಜನ ಹಿತ ಮರೆತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಿರಂತರ ಹೆಚ್ಚಾಗುತ್ತಿದೆ. ತೆರಿಗೆ ದರ ಪೆಟ್ರೋಲ್ ಗೆ 32.90 ಹಾಗೂ ಡೀಸೆಲ್ 31.84 ಹೆಚ್ಚಾಗಿದೆ. ಪೆಟ್ರೋಲ್ ಡೀಸೆಲ್ ದರ ಏರಿಕೆ ಎಲ್ಲಾ ಕ್ಷೇತ್ರದ ಮೇಲೆ ಇದರ ಪರಿಣಾಮ ಬೀರುತ್ತಿದೆ.‌ ದಿನ ನಿತ್ಯ ಬಳಕೆ ಮಾಡುವ ಆಹಾರ ಪದಾರ್ಥಗಳ ಬೆಲೆ ಏಪ್ರಿಲ್ ತಿಂಗಳಲ್ಲಿ ಐದು ‌ಶೇ ಹೆಚ್ಚಾಗಿದೆ ಎಂದರು.

ಅಡುಗೆ ಎಣ್ಣೆ ದರ 200 ರೂಪಾಯಿಗೆ ತಲುಪಿದೆ. ಈ‌ ಹಿಂದೆ 4000 ರೂಪಾಯಿ ಜೀವನ ನಡೆಸಲು ಅಗತ್ಯ ಇದ್ದರೆ ಇವಾಗ ಹತ್ತು ಸಾವಿರ ಬೇಕು. ಈ ಬಗ್ಗೆ ಪ್ರಶ್ನೆ ಕೇಳಿದರೆ ಇದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ‌

ಸದ್ಯದ ಪರಿಸ್ಥಿತಿ ಬಗ್ಗೆ ಜನರು ಹೇಗೆ ರಿಯಾಕ್ಟ್ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಕಾರ್ಪೋರೆಟ್ ತೆರಿಗೆ ಕಡಿಮೆ ಮಾಡಿದರು ಆದರೆ ಇದನ್ನು ಹೆಚ್ಚು ಮಾಡಲು ಏಕೆ ಆಗಲ್ಲ? ದೇಶದ 90 ಶೇ ಜನರ ಆರ್ಥಿಕ ಆದಾಯ ಬಿದ್ದು ಹೋಗಿದೆ.‌ ಶ್ರೀಮಂತರ ಆದಾಯ ಹೆಚ್ಚಾಗುತ್ತಿದೆ. ಕೊರೊನಾ ಶ್ರೀಮಂತ ಕಾರ್ಪೊರೇಟ್ ಗಳ ಆದಾಯಕ್ಕೆ ಅಡ್ಡಿ ಉಂಟು ಮಾಡಿಲ್ಲ ಎಂದರು.

ಖರ್ಚು ವೆಚ್ಚ ಹೆಚ್ಚಳ ಆಗುತ್ತಿರುವುದರಿಂದ ಜನರ ಜೀವನ ಅಧೋಗತಿಗೆ ಇಳಿದಿದೆ. ಕೇಂದ್ರ ಸರ್ಕಾರದ ಆದ್ಯತೆ ಶ್ರೀಮಂತರ ಪರವಾಗಿದೆ. ಜನಸಾಮಾನ್ಯರ ಭವಿಷ್ಯದ ಮೇಲೆ ಚೆಲ್ಲಾಟ ಆಡುತ್ತಿದೆ. ಇಂಧನ ದರ ಏರಿಕೆ ಆಗಿದೆ. ಇದರಿಂದ ಜನರ ಜೇಬನ್ನು ಮತ್ತಷ್ಟು ಖಾಲಿ ಮಾಡಲಾಗುತ್ತಿದೆ.‌ ಕೈಗಾರಿಕೆಗಳಿಗೂ ಇದರಿಂದ ಸಂಕಷ್ಟ. ಸದ್ಯಕ್ಕೆ ಏಕೆ ಈ ನಿರ್ಧಾರ ಕೈಗೊಳ್ಳಬೇಕಿತ್ತು? ಎಂದು ಪ್ರಶ್ನಿಸಿದರು.

ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ಬಿ ಪಿಎಲ್ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿ ಸಹಾಯ ಧನ ನೀಡಬೇಕು. ಆಸ್ತಿ ತೆರಿಗೆಯಲ್ಲಿ ಶೇ. 50 ರಷ್ಟು ವಿನಾಯಿತಿ ನೀಡಬೇಕು. ಜೊತೆಗೆ ವಿದ್ಯುತ್ ದರ ಇಳಿಸಿ ಯಥಾಸ್ಥಿತಿ ಕಾಪಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿಗೆ ದೇಶ ಮುಖ್ಯವಲ್ಲ
ಕೊರೊನಾ, ದೇಶದ ಜನ, ಪ್ರಜಾಪ್ರಭುತ್ವ ಬಗ್ಗೆ ಆಲೋಚನೆ ಮಾಡಲ್ಲ ಮೋದಿ ಶಾ ನೇತೃತ್ವದ ಬಿಜೆಪಿ ಸರ್ಕಾರಕ್ಕೆ, ರಾಜ್ಯದಲ್ಲೂ ಅವರಿಗೆ ಅಧಿಕಾರ ಮುಖ್ಯ, ಬಿಜೆಪಿಯಲ್ಲಿ ಎರಡು ಗುಂಪು ಇದೆ.‌ ಬಿಎಸ್ ವೈ ಇಳಿಸುವ ತಂತ್ರವನ್ನು ಬಿಜೆಪಿಯವರೇ ಮಾಡುತ್ತಾರೆ. ಬೇರೆ ಉದ್ದೇಶದಿಂದ ಮಾಡುತ್ತಿದ್ದಾರೆ. ‌ಉದ್ದೇಶ ಈಡೇರಿಸದರೆ ಸುಮ್ಮನಾಗುತ್ತಾರೆ ಎಂದರು.‌

LEAVE A REPLY

Please enter your comment!
Please enter your name here