ಬಾವಲಿಗಳಲ್ಲಿ ಇನ್ನೂ 24 ರೀತಿಯ ಕೊರೊನಾ ವೈರಾಣು ಪತ್ತೆ: ಚೀನಾ ಸಂಶೋಧನೆ

0
4
ಬೀಜಿಂಗ್‌: ಬಾವಲಿಗಳಲ್ಲಿ ಇನ್ನೂ 24 ರೀತಿಯ ಕೊರೊನಾ ವೈರಾಣು ಇರುವುದನ್ನು ಚೀನಾದ ಸಂಶೋಧಕರು ಪತ್ತೆ ಮಾಡಿದ್ದಾರೆ.”ಚೀನಾದ ನೈರುತ್ಯ ಪ್ರಾಂತ್ಯಗಳಲ್ಲಿನ ಗ್ರಾಮಗಳು ಮತ್ತು ಅರಣ್ಯ ಪ್ರದೇಶಗಳಲ್ಲಿನ ಬಾವಿಗಳಲ್ಲಿ ವಾಸಿಸುವ ಬಾವಲಿಗಳ ಮೂತ್ರ, ಮಲಗಳ ಮಾದರಿಗಳನ್ನು ಸಂಶೋಧಕರು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ.

ಜತೆಗೆ ಕೆಲವು ಬಾವಲಿಗಳನ್ನು ಸೆರೆಹಿಡಿದು ಅವುಗಳ ಬಾಯಿಯ ಜೊಲ್ಲುಗಳ ಮಾದರಿಯನ್ನೂ ಕೂಡ ಸಂಗ್ರಹಿಸಿದ್ದಾರೆ. ಈ ಎಲ್ಲ ಮಾದರಿಗಳ ಸಂಗ್ರಹ ಪ್ರಕ್ರಿಯೆಯೂ 2019ರ ಮೇನಿಂದ 2020ರ ನವೆಂಬರ್‌ ನಡುವೆ ಆಗಿದೆ. ಇವುಗಳಲ್ಲಿ24 ಹೊಸ ಮಾದರಿಯ ಕೊರೊನಾ ವೈರಾಣುಗಳು ಪತ್ತೆಯಾಗಿವೆ,” ಎಂದು ಸುದ್ದಿಸಂಸ್ಥೆ ಸಿಎನ್‌ಎನ್‌ ವರದಿ ಮಾಡಿದೆ.

ಸದ್ಯ ವಿಶ್ವಾದ್ಯಂತ ವ್ಯಾಪಿಸಿ ಮೂರನೇ ಮತ್ತು ನಾಲ್ಕನೇ ಅಲೆಯ ಸಾಂಕ್ರಾಮಿಕಕ್ಕೆ ಕಾರಣವಾಗಿರುವ ಸಾರ್ಸ್‌-ಕೊವಿ-2 ರಚನೆಯನ್ನೇ ಹೋಲುವ ಮತ್ತೊಂದು ವೈರಾಣು ಸಹ ಕೆಲವು ಬಾವಲಿಗಳಲ್ಲಿ ಪತ್ತೆಯಾಗಿದೆ. ಬಾವಲಿಗಳನ್ನು ಆಶ್ರಯಿಸಿರುವ ಕೊರೊನಾ ಮತ್ತು ಅದೇ ಮಾದರಿಯ ಇತರ ಅಪಾಯಕಾರಿ ವೈರಾಣುಗಳು, ಒಂದು ಬಾವಲಿಯಿಂದ ಮತ್ತೊಂದಕ್ಕೆ ಪ್ರಸರಿಸುತ್ತಿರುತ್ತವೆ.

ಥಾಯ್ಲೆಂಡ್‌ನಲ್ಲಿ 2020ರ ಜೂನ್‌ನಲ್ಲಿ ಸಂಗ್ರಹಿಸಿದ ಬಾವಲಿಯೊಂದರ ಮಲ-ಮೂತ್ರದ ಮಾದರಿಯಲ್ಲಿ ಕೋವಿಡ್‌-19 ವೈರಾಣು ಸಿಕ್ಕಿದೆ. ಹಾಗಾಗಿ ವಿವಿಧ ಪ್ರಾಂತ್ಯಗಳಲ್ಲಿನ ಬಾವಲಿಗಳಲ್ಲಿ ಕೊರೊನಾ ವೈರಾಣು ಇದ್ದು, ಕೆಲವು ಪ್ರದೇಶಗಳಲ್ಲಿ ಬಾವಲಿಗಳಿಂದ ಮನುಷ್ಯರಿಗೆ ತೀವ್ರವಾಗಿ ಪ್ರಸರಣವಾಗುತ್ತದೆ ಎಂಬುದೂ ತಿಳಿದುಬಂದಿದೆ. ಸಂಶೋಧನೆಯ ಆಘಾತಕಾರಿ ಸಂಗತಿಗಳನ್ನು ಶಾನ್‌ಡಾಂಗ್‌ ವಿಶ್ವವಿದ್ಯಾಲಯದ ಸಂಶೋಧಕರು ಮತ್ತು ವಿಜ್ಞಾನಿಗಳು ‘ಸೆಲ್‌’ ಎಂಬ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ.

ಚೀನಾದ್ದೇ ಕುತಂತ್ರವೇ?
ಅಮೆರಿಕ ಸರಕಾರವು ಸ್ವತಂತ್ರವಾಗಿ ಕೊರೊನಾ ವೈರಾಣುವಿನ ಮೂಲದ ಪತ್ತೆ ಶುರು ಮಾಡಿದೆ. ವಿಶ್ವಸಂಸ್ಥೆ ಕೂಡ ತನ್ನ ಯೋಜನೆಗಳ ಮೂಲಕ ಈ ಕಾರ್ಯದಲ್ಲಿ ನಿರತವಾಗಿದೆ. ಈ ಹಿನ್ನೆಲೆಯಲ್ಲಿ, ಚೀನಾದ ವುಹಾನ್‌ ನಗರದ ಲ್ಯಾಬ್‌ನಿಂದ ಕೊರೊನಾ ವೈರಾಣು ಮೊದಲ ಪ್ರಸರಣ ಆರಂಭಿಸಿದೆ. ಇದು ಕೃತಕವಾಗಿ ರಚಿಸಲಾದ ವೈರಾಣುವಾಗಿದ್ದು, ಜೈವಿಕ ಸಮರಕ್ಕೆ ಚೀನಾದಲ್ಲಿ ಸಿದ್ಧತೆಗಳು ನಡೆದಿತ್ತು ಎಂಬ ಗಂಭೀರ ಆರೋಪವನ್ನು ಜರ್ಮನಿ ಸೇರಿದಂತೆ ಅನೇಕ ರಾಷ್ಟ್ರಗಳ ವಿಜ್ಞಾನಿಗಳು ಮಾಡಿದ್ದಾರೆ.

ಹೀಗಾಗಿ ತನ್ನ ದುಷ್ಕೃತ್ಯ ಬಯಲಾಗುವ ಭಯದಲ್ಲಿರುವ ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಸರಕಾರವು ಹೊಸದೊಂದು ವರದಿ ಪ್ರಕಟಿಸುವ ಮೂಲಕ, ಜಗತ್ತಿನ ಎಲ್ಲ ಪ್ರಾಂತ್ಯಗಳಲ್ಲಿನ ಬಾವಲಿಗಳಲ್ಲೂ ಕೊರೊನಾ ಇರುತ್ತದೆ ಎಂಬ ಹೊಸ ವಾದ ಮಂಡಿಸುತ್ತಿರಬಹುದು ಎಂದು ಅಂತಾರಾಷ್ಟ್ರೀಯ ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here