ರಾಜ್ಯದಲ್ಲಿ ಕೊರೊನಾ ಅಲ್ಪ ಏರಿಕೆ, ಶೇ. 7ಕ್ಕಿಂತ ಕೆಳಕ್ಕಿದೆ ಪಾಸಿಟಿವಿಟಿ ದರ

0
1
ಬೆಂಗಳೂರು: ಗುರುವಾರ ರಾಜ್ಯದಲ್ಲಿ 11,042 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳ ಸಂಖ್ಯೆ 27,39,290ಕ್ಕೆ ಏರಿಕೆಯಾಗಿದೆ. ಬುಧವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳ ಸಂಖ್ಯೆ ಅಲ್ಪ ಏರಿಕೆಯಾಗಿದ್ದರೂ, ಪಾಸಿಟಿವಿಟಿ ದರ ಶೇ. 7ಕ್ಕಿಂತ (6.58%) ಕಡಿಮೆಯೇ ಇದೆ. ಗುರುವಾರ 1,67,731 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಒಂದು ದಿನದ ಅಂತರದಲ್ಲಿ ಕರ್ನಾಟಕದಲ್ಲಿ ಕೋವಿಡ್‌ನಿಂದ 194 ಜನರು ಅಸುನೀಗಿದ್ದಾರೆ. ಒಟ್ಟು ಈವರೆಗೆ ರಾಜ್ಯದಲ್ಲಿ 32,485 ಸೋಂಕಿತರು ಸಾವನ್ನಪ್ಪಿದಂತಾಗಿದೆ. ಬೆಂಗಳೂರಿನಲ್ಲಿ 47 ಸೋಂಕಿತರು ಸಾವನ್ನಪ್ಪಿದ್ದರೆ, ಮೈಸೂರಿನಲ್ಲಿ 18, ಬೆಳಗಾವಿಯಲ್ಲಿ 12, ಹಾಸನದಲ್ಲಿ 10 ಮಂದಿ ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಉಳಿದ ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ಜನರು ಅಸುನೀಗಿದ್ದಾರೆ.

ಜಿಲ್ಲೆಗಳಲ್ಲಿ ಸೋಂಕು ಅಲ್ಪ ಏರಿಕೆ
ಬೆಂಗಳೂರಿನಲ್ಲಿ ಗುರುವಾರ 2,191 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಮೈಸೂರಿನಲ್ಲಿ 1,011, ಹಾಸನದಲ್ಲಿ 776, ದಕ್ಷಿಣ ಕನ್ನಡದಲ್ಲಿ 580, ತುಮಕೂರಿನಲ್ಲಿ 571, ಶಿವಮೊಗ್ಗದಲ್ಲಿ 521 ಹೊಸ ಪ್ರಕರಣಗಳು ವರದಿಯಾಗಿವೆ. ಉಳಿದ 24 ಜಿಲ್ಲೆಗಳಲ್ಲಿ 500ಕ್ಕಿಂತ ಕಡಿಮೆ ಕೇಸ್‌ಗಳು ಪತ್ತೆಯಾಗಿವೆ.

ಸಕ್ರಿಯ ಪ್ರಕರಣ 2.10 ಲಕ್ಷಕ್ಕೆ ಇಳಿಕೆ
ಗುರುವಾರ 15,721 ಕೊರೊನಾ ಸೋಂಕಿತರು ಕರ್ನಾಟಕದಲ್ಲಿ ಗುಣಮುಖರಾಗಿದ್ದು, ಒಟ್ಟು ಇಲ್ಲಿಯವರೆಗೆ 24,96,132 ರೋಗಿಗಳು ಚೇತರಿಸಿಕೊಂಡಿದ್ದಾರೆ.

ಹೊಸ ಪ್ರಕರಣಗಳಿಗಿಂತ ಹೆಚ್ಚಿನ ಸಂಖ್ಯೆಯ ಸೋಂಕಿತರು ಗುಣಮುಖರಾಗಿದ್ದರಿಂದ ಆಕ್ಟಿವ್‌ ಕೇಸ್‌ಗಳ ಸಂಖ್ಯೆ 2,10,652ಕ್ಕೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 95,423 ಸಕ್ರಿಯ ಪ್ರಕರಣಗಳಿದ್ದರೆ, ಮೈಸೂರಿನಲ್ಲಿ 14,410 ಆಕ್ಟಿವ್‌ ಕೇಸ್‌ಗಳಿವೆ. ಉಳಿದೆಲ್ಲಾ ಜಿಲ್ಲೆಗಳಲ್ಲಿ 10 ಸಾವಿರಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ.

ಇನ್ನು ಲಸಿಕೆ ಅಭಿಯಾನವೂ ತಕ್ಕಮಟ್ಟಿಗೆ ವೇಗವಾಗಿ ನಡೆಯುತ್ತಿದ್ದು ಗುರುವಾರ 1,81,832 ಡೋಸ್‌ ಲಸಿಕೆ ನೀಡಲಾಗಿದೆ. ಒಟ್ಟು ಇಲ್ಲಿಯವರೆಗೆ 1,61,64,515 ಡೋಸ್ ಲಸಿಕೆ ನೀಡಲಾಗಿದೆ.

LEAVE A REPLY

Please enter your comment!
Please enter your name here