‘777 ಚಾರ್ಲಿ’ಸಿನಿಮಾದ ಚಾರ್ಲಿಯಂತೆ ವೈರಲ್ ಆದ ರಶ್ಮಿಕಾ ಮಂದಣ್ಣರ ಮುದ್ದಿನ ಔರ!

0
3
ನಟ ರಕ್ಷಿತ್‌ ಶೆಟ್ಟಿ ಬರ್ತಡೇ ದಿನದಂದು ಬಿಡುಗಡೆಯಾದ ಅವರ ನಟನೆಯ ‘777 ಚಾರ್ಲಿ’ ಸಿನಿಮಾದ ಟೀಸರ್‌ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲಿರುವ ಮುದ್ದು ನಾಯಿ ಚಾರ್ಲಿ ಈಗಾಗಲೇ ವೈರಲ್‌ ಆಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯಕ್ಕೆ ಎಲ್ಲೆಡೆ ಚಾರ್ಲಿಯದ್ದೇ ಸುದ್ದಿ.

0.3 ಮಿಲಿ ಸೆಕೆಂಡ್‌ನಲ್ಲೇ ರಶ್ಮಿಕಾ ಹೃದಯ ಕರಗಿತು
ಅದೇ ದಿನ ಚಾರ್ಲಿಯಷ್ಟೆ ವೈರಲ್‌ ಆದ ಇನ್ನೊಂದು ನಾಯಿ ಎಂದರೆ ‘ಔರ’! ಹೌದು, ಇದು ನಟಿ ಅವರ ಹೊಸ ನಾಯಿಮರಿ. ಅದರ ಫೋಟೊಗಳನ್ನು ಅವರು ಭಾನುವಾರದಂದೇ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ, ‘ಈಗಿನ ಜಂಜಾಟಗಳ ಮಧ್ಯೆ ನನಗೊಂದು ಬಂಡಲ್‌ ಆಫ್‌ ಜಾಯ್‌ ಸಿಕ್ಕಿದೆ. ನನ್ನ ಪುಟ್ಟ ಔರಳನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಪ್ರೀತಿ ಹುಟ್ಟಲು ಕೇವಲ ಮೂರೇ ಸೆಕೆಂಡ್‌ ಸಾಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಔರ ಕೇವಲ 0.3 ಮಿಲಿ ಸೆಕೆಂಡ್‌ನಲ್ಲೇ ನನ್ನ ಹೃದಯವನ್ನು ಕರಗಿಸಿದಳೆಂದು ಅನಿಸುತ್ತದೆ’ ಎಂದು ಬರೆದುಕೊಂಡಿದ್ದರು.

ವಿಧ ವಿಧವಾದ ಕಾಮೆಂಟ್ ಮಾಡಿದ ನೆಟ್ಟಿಗರು
ಮುದ್ದಾದ ಔರ ಜೊತೆಗಿರುವ ರಶ್ಮಿಕಾ ಮಂದಣ್ಣ ಫೋಟೋಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕೆಲವರು ರಶ್ಮಿಕಾ ಮಂದಣ್ಣರಿಗೆ ಟಾಂಗ್‌ ನೀಡಿದ್ದು, ರಕ್ಷಿತ್‌ ಶೆಟ್ಟಿಯವರ ಬರ್ತಡೇಯಂದೇ ತಮ್ಮ ಹೊಸ ನಾಯಿಮರಿಯನ್ನು ಪರಿಚಯಿಸಿದ್ದು ಏಕೆ? ಚಾರ್ಲಿಗೆ ಔರಾ ಜೋಡಿಯೇ? ರಕ್ಷಿತ್‌ ಶೆಟ್ಟಿ ಚಾರ್ಲಿಯನ್ನು ಪರಿಚಯಿಸಿದರೆ ರಶ್ಮಿಕಾ ಔರಾಳನ್ನು ಪರಿಚಯಿಸಿದ್ದೇಕೆ? ಮುಂತಾದ ಕಾಮೆಂಟ್‌ಗಳನ್ನು ಹಾಕಿದ್ದಾರೆ.

ರಕ್ಷಿತ್ ಬರ್ತಡೇಗೆ ಯಾಕೆ ವಿಶ್ ಮಾಡಿಲ್ಲ ರಶ್ಮಿಕಾ?
ಇನ್ನು ಕೆಲವರು, ರಶ್ಮಿಕಾ ಮಂದಣ್ಣ ಅವರು ರಕ್ಷಿತ್‌ಗೆ ಬರ್ತಡೇ ವಿಶ್‌ ಮಾಡದೆ ತಮ್ಮ ಸಾಕುಪ್ರಾಣಿಯ ಫೋಟೋ ಶೇರ್‌ ಮಾಡಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ಸದ್ಯಕ್ಕೆ ಎಲ್ಲೆಡೆ ಚಾರ್ಲಿ ಮತ್ತು ಔರಾರದ್ದೇ ಚರ್ಚೆ. ಇನ್ನು , ರಶ್ಮಿಕಾ ಮಂದಣ್ಣ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here