‘ಆ’ ಬಿಗ್ ಬಜೆಟ್ ಸಿನಿಮಾದಲ್ಲಿ ಮಹತ್ವದ ಪಾತ್ರ ಮಾಡಲಿದ್ದಾರಾ ನಟ ಅರ್ಜುನ್ ಸರ್ಜಾ?

0
2
‘ಆ್ಯಕ್ಷನ್‌ ಕಿಂಗ್’ ಕನ್ನಡ, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಬೇಡಿಕೆ ಇಟ್ಟಕೊಂಡಿದ್ದಾರೆ. ಮೊದಲೆಲ್ಲ ಹೀರೋ ಆಗಿ ಫೇಮಸ್ ಆಗಿದ್ದ ಅವರೀಗ ಪೋಷಕ ಪಾತ್ರಗಳತ್ತ, ಅದರಲ್ಲೂ ಚಿತ್ರದಲ್ಲಿ ಮಹತ್ವದ ಪಾತ್ರಗಳನ್ನು ಮಾಡುತ್ತಿದ್ದಾರೆ. ಸ್ಕ್ರಿಪ್ಟ್‌ ಆಯ್ಕೆಯಲ್ಲೂ ಸಖತ್ ಚ್ಯೂಸಿ. ಇದೀಗ ಅವರು ಬಿಗ್ ಬಜೆಟ್ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಸರ್ಕಾರು ವಾರಿ ಪಾಟದಲ್ಲಿ ‘ಆ್ಯಕ್ಷನ್‌ ಕಿಂಗ್’?
ನಟನೆಯ ”ದಲ್ಲಿ ಅರ್ಜುನ್ ಸರ್ಜಾ ನಟಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಮೊದಲು ಆ ಪಾತ್ರಕ್ಕೆ ಅರವಿಂದ್ ಸ್ವಾಮಿ, ಅನಿಲ್‌ ಕಪೂರ್ ಹೆಸರುಗಳು ಆ ಪಾತ್ರಕ್ಕೆ ಕೇಳಿಬಂದಿದ್ದವು. ಈಗ ಅರ್ಜುನ್ ಸರ್ಜಾ ಹೆಸರು ಕೇಳಿಬಂದಿದೆ. ಬಹುತೇಕ ಅವರು ನಟಿಸುವುದು ಖಚಿತ ಎನ್ನಲಾಗಿದ್ದು, ಅವರಿಲ್ಲಿ ಮಹೇಶ್‌ಗೆ ವಿಲನ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಈಚೆಗೆ ದುಬೈನಲ್ಲಿ ಒಂದು ಹಂತದ ಶೂಟಿಂಗ್ ಅನ್ನು ಚಿತ್ರತಂಡ ಮುಗಿಸಿಕೊಂಡು ಬಂದಿದೆ.

ಸರ್ಕಾರು ವಾರಿ ಪಾಟ ಶೂಟಿಂಗ್ ಸ್ಥಗಿತ
ಸದ್ಯ ‘ಸರ್ಕಾರು ವಾರಿ ಪಾಟ’ ಚಿತ್ರದ ಶೂಟಿಂಗ್ ನಿಂತಿದೆ. ಹೈದರಾಬಾದ್‌, ಗೋವಾದಲ್ಲಿ ನಡೆಯಬೇಕಿದ್ದ ಶೂಟಿಂಗ್ ಶೆಡ್ಯೂಲ್ ಚಿತ್ರತಂಡ ಕ್ಯಾನ್ಸಲ್ ಮಾಡಿದೆ. ಚಿತ್ರತಂಡದ ಕೆಲವರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಹಾಗೂ ಕೊರೊನಾ ಎರಡನೇ ಅಲೆ ಜೋರಾಗಿರುವುದರಿಂದ ಶೂಟಿಂಗ್ ನಿಲ್ಲಿಸಲಾಗಿದೆ. ಪರಿಸ್ಥಿತಿ ಸುಧಾರಿಸಿದ ಮೇಲೆ ಶೂಟಿಂಗ್ ಪುನಃ ಆರಂಭಗೊಳ್ಳಲಿದೆ. ಮೈತ್ರಿ ಮೂವೀ ಮೇಕರ್ಸ್‌, 14 ರೀಲ್ಸ್ ಹಾಗೂ ಮಹೇಶ್ ಬಾಬು ಈ ಸಿನಿಮಾಗೆ ಜಂಟಿಯಾಗಿ ಹಣ ಹಾಕುತ್ತಿದ್ದಾರೆ.

ಇನ್ನು, ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳು 35 ಕೋಟಿ ರೂ.ಗಳಿಗೆ ಮಾರಾಟವಾಗಿವೆ ಎಂಬ ಮಾಹಿತಿ ಕೇಳಿಬಂದಿದೆ. ಹಿಂದಿ ಡಬ್ಬಿಂಗ್ ಹಕ್ಕು ಸೇರಿದಂತೆ ಒಂದಷ್ಟು ಹಕ್ಕುಗಳು ಮಾರಾಟವಾಗಿಲ್ಲ. ಅದರ ಹೊರತಾಗಿಯೇ 35 ಕೋಟಿ ರೂ.ಗಳನ್ನು ನಿರ್ಮಾಪಕರು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ‘ಗೀತಾ ಗೋವಿಂದಂ’ಗೆ ನಿರ್ದೇಶನ ಮಾಡಿದ್ದ ಪರಶುರಾಮ್‌ ‘ಸರ್ಕಾರು ವಾರಿ ಪಾಟ’ಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ‘ಅಲಾ ವೈಕುಂಠಪುರಮುಲೋ’, ‘ಯುವರತ್ನ’ ಖ್ಯಾತಿಯ ಎಸ್‌. ಥಮನ್ ಈ ಸಿನಿಮಾಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here