ಶ್ರೀರಂಗಪಟ್ಟಣದಲ್ಲಿ ದಾಯಾದಿ ಕಲಹ: ಆಸ್ತಿಗಾಗಿ ಅಣ್ಣನನ್ನೇ ಕೊಂದ ತಮ್ಮ..!

0
7
ಶ್ರೀರಂಗಪಟ್ಟಣ (): ಆಸ್ತಿ ವಿಚಾರವಾಗಿ ದಾಯಾದಿಗಳ ನಡುವೆ ನಡೆದ ಕಲಹದಲ್ಲಿ ಅಣ್ಣನನ್ನು ತಮ್ಮನೇ ಮಾಡಿ ಅತ್ತಿಗೆ ಹಾಗೂ ಅವರ ಪುತ್ರಿಗೆ ಚಾಕುವಿನಿಂದ ಇರಿದಿರುವ ಘಟನೆ, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಬಾಲಕೃಷ್ಣ (54) ಕೊಲೆಯಾದವರು. ಇವರ ಪತ್ನಿ ಸರಳಾ, ಪುತ್ರಿ ವೈಷ್ಣವಿ ಕೂಡ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಬಾಲಕೃಷ್ಣನ ಸುರೇಶ ಕೊಲೆ ಮಾಡಿದ ಆರೋಪಿ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಶ್‌ – ಬಾಲಕೃಷ್ಣ ನಡುವೆ ಆಸ್ತಿ ವಿವಾದಕ್ಕೆ ಜಗಳ ಪ್ರಾರಂಭವಾಗಿದ್ದು, ಸುರೇಶ ಕುಪಿತಗೊಂಡು ಚಾಕುವಿನಿಂದ ತನ್ನ ಬಾಲಕೃಷ್ಣನಿಗೆ ಇರಿದಿದ್ದಾನೆ.

ಜಗಳ ಬಿಡಿಸಲು ಹೋದ ಅತ್ತಿಗೆ ಸರಳಾ ಹಾಗೂ ಅವರ ಪುತ್ರಿ ವೈಷ್ಣವಿ ಅವರಿಗೂ ಇರಿದಿದ್ದಾನೆ. ಈ ವೇಳೆ ಅಣ್ಣ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್‌ಪಿ ಸಂದೇಶ್‌ ಕುಮಾರ್‌, ಸಬ್‌ ಇನ್‌ಸ್ಪೆಕ್ಟರ್‌ ಪುನೀತ್‌ ಭೇಟಿ ನೀಡಿ ಪರಿಶೀಲಿಸಿದರು. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here