ಕೋವಿಡ್‌ ಲಸಿಕೆ: ವಿರೋಧ ಪಕ್ಷಗಳು ಆಧಾರವಿಲ್ಲದ ವದಂತಿಗಳನ್ನು ಹರಡುತ್ತಿವೆ, ಸುಧಾಕರ್‌ ಆರೋಪ

0
6
ಬೆಂಗಳೂರು: ಕೋವಿಡ್‌ ಲಸಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಆಧಾರವಿಲ್ಲದ ವದಂತಿಗಳನ್ನು ಹರಡುತ್ತಿವೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಆರೋಪ ಮಾಡಿದ್ದಾರೆ. ಲಸಿಕೆ ಕುರಿತಾಗಿ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ತಮ್ಮದೇ ಆದ ರೀತಿಯಲ್ಲಿ ಅವರು ಸಮರ್ಥನೆಯನ್ನು ನೀಡಿದ್ದಾರೆ.

ಭಾರತವು ಇದುವರೆಗೂ 20 ಕೋಟಿ ಜನರಿಗೆ ಲಸಿಕೆ ನೀಡಿದೆ. ಆದರೆ ರಾಜಕೀಯ ಪ್ರೇರಿತ ಪ್ರಚಾರವು ಸಂಪೂರ್ಣ ವ್ಯಾಕ್ಸಿನೇಷನ್ ಪ್ರಕ್ರಿಯೆ ಮತ್ತು ಚಾಲನೆಯ ಬಗ್ಗೆ ಆಧಾರವಿಲ್ಲದ ವದಂತಿಗಳನ್ನು ಹರಡುತ್ತಿದೆ. ಪ್ರಪಂಚದ ಅತೀ ದೊಡ್ಡ ಲಸಿಕಾ ಅಭಿಯಾನದ ಬಗೆಗಿನ ಸತ್ಯ ಮಿಥ್ಯ ಗಳನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ ಎಂದು ಟ್ವೀಟ್‌ ಮೂಲಕ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಆರೋಪ: ವಿದೇಶದಿಂದ ಲಸಿಕೆಯನ್ನು ಖರೀದಿ ಮಾಡಲು ಕೇಂದ್ರ ಸರ್ಕಾರವು ಸಾಕಷ್ಟು ಶ್ರಮ ವಹಿಸುತ್ತಿಲ್ಲ

ಸುಧಾಕರ್‌ ಸ್ಪಷ್ಟನೆ : ಕೇಂದ್ರ ಸರ್ಕಾರವು 2020 ರ ಮಧ್ಯಭಾಗದಲ್ಲಿ ಎಲ್ಲ ಪ್ರಮುಖ ಅಂತರಾಷ್ಟ್ರೀಯ ಲಸಿಕಾ ತಯಾರಕ ಸಂಸ್ಥೆಗಳ ಜೊತೆ ನಿರಂತರ ಸಂಪರ್ಕದಲ್ಲಿದೆ. ಫೈಜರ್‌ ಮತ್ತು ಮಾಡೆರ್ನಾ ಜೊತೆ ಅನೇಕ ಸುತ್ತಿನ ಮಾತುಕತೆ ನಡೆದಿದೆ. ಭಾರತ ಈ ಕಂಪನಿಗಳ ಲಸಿಕೆಯನ್ನು ಸರಬರಾಜು ಮತ್ತು ತಯಾರಿಕೆಯನ್ನು ಮಾಡಲು ಸರ್ಕಾರ ಅವರಿಗೆ ಎಲ್ಲ ರೀತಿಯ ನೆರವನ್ನು ನೀಡುತ್ತ ಬಂದಿದೆ.

ಆದರೆ ಅವರ ಲಸಿಕೆಗಳು ಉಚಿತವಾಗಿ ಸರಬರಾಜು ಮಾಡಲು ಲಭ್ಯವಿರಲಿಲ್ಲ. ಲಸಿಕೆಯನ್ನು ಅಂತರಾಷ್ಟ್ರೀಯವಾಗಿ ಖರೀದಿ ಮಾಡುವುದು ಸಿದ್ದವಿರುವ ವಸ್ತುಗಳನ್ನು ಖರೀದಿ ಮಾಡದ ರೀತಿ ಅಲ್ಲ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ಜಾಗತಿಕವಾಗಿ ಲಸಿಕೆಯ ಸರಬರಾಜು ಸೀಮಿತ ಪ್ರಮಾಣದಲ್ಲಿದೆ ಮತ್ತು ಕಂಪನಿಗಳಿಗೆ ಅವುಗಳದ್ದೇ ಆದ ಆದ್ಯತೆಗಳು, ಕಾರ್ಯತಂತ್ರಗಳು ಮತ್ತು ಒತ್ತಡಗಳಿರುತ್ತವೆ. ತಮ್ಮ ದೇಶೀಯ ಲಸಿಕೆ ತಯಾರಿಕಾ ಸಂಸ್ಥೆಗಳು ತಮ್ಮ ರಾಷ್ಟ್ರಕ್ಕೆ ಆದ್ಯತೆ ನೀಡಿದಂತೆ ಈ ಕಂಪನಿಗಳಕೂಡಾ ಅವರದ್ದೇ ಮೂಲ ದೇಶಗಳಿಗೆ ಆದ್ಯತೆ ನೀಡುತ್ತವೆ.

ಫೈಜರ್ ಕಂಪನಿಯು ಲಸಿಕೆ ಲಭ್ಯತೆಯಿದೆ ಎಂದು ಸೂಚನೆ ನೀಡಿದ ತಕ್ಷಣವೇ ಕೇಂದ್ರ ಸರ್ಕಾರ ಮತ್ತು ಆ ಸಂಸ್ಥೆಯು ಲಸಿಕೆಯನ್ನು ಸಾಧ್ಯವಾದಷ್ಟು ತ್ವರಿತವಾಗಿ ಆದಮು ಮಾಡಿಕೊಳ್ಳಲು ಕಾರ್ಯ ಆರಂಭಿಸಿದವು. ಭಾರತ ಸರ್ಕಾರದ ಪ್ರಯತ್ನಗಳ ಫಲವಾಗಿ ಸ್ಪುಟ್ನಿಕ್ ಲಸಿಕಾ ಕ್ಲಿನಿಕಲ್ ಪರೀಕ್ಷೆಗಳಿಗೆ ವೇಗ ಪಡೆದುಕೊಂಡಿತು ಹಾಗೂ ಸಕಾಲದಲ್ಲಿ ನೀಡಿದ ಹಿನ್ನೆಲೆಯಲ್ಲಿ ರಷ್ಯಾ ಈಗಾಗಲೇ ಎರಡು ಹಂತದಲ್ಲಿ ಉತ್ಪನ್ನಗಳನ್ನು ಕಳುಹಿಸಿದೆ.

ಮತ್ತು ನಮ್ಮ ಕಂಪನಿಗಳಿಗೆ ಬೇಕಾದ ತಂತ್ರಜ್ಞಾನವನ್ನು ಒದಗಿಸಿದೆ. ಇದರಿಂದಾಗಿ ತಯಾರಿಕಾ ಕಾರ್ಯಗಳು ಶೀಘ್ರದಲ್ಲಿಯೇ ಆರಂಭವಾಗಲಿದೆ. ಭಾರತ ಮತ್ತು ವಿಶ್ವದ ಉತ್ಪಾದನೆಗಾಗಿ ಭಾರತಕ್ಕೆ ಬಂದು ಉತ್ಪಾದನೆಯನ್ನು ಆರಂಭಿಸುವಂತೆ ಎಲ್ಲ ಅಂತರಾಷ್ಟ್ರೀಯ ಲಸಿಕಾ ತಯಾರಿಕಾ ಸಂಸ್ಥೆಗಳಿಗೆ ನಾವು ಮನವಿ ಮಾಡಿಕೊಂಡಿದ್ದೇವೆ ಎಂದು ವಿರೋಧ ಪಕ್ಷಗಳ ಆರೋಪಕ್ಕೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here