ಹೊಸ ಸೋಂಕಿತರಿಗಿಂತ ದುಪ್ಪಟ್ಟಾದ ಗುಣಮುಖರ ಸಂಖ್ಯೆ! ಮರಣ ಪ್ರಮಾಣ ಹೆಚ್ಚಳ!

0
5
ಬೆಂಗಳೂರು: ರಾಜ್ಯದಲ್ಲಿ ಶನಿವಾರ ಹೊಸದಾಗಿ 20,628 ಜನರಿಗೆ ಸೋಂಕು ತಗುಲಿದ್ದು. ಸೋಂಕಿತರ ಸಂಖ್ಯೆಯ ದುಪ್ಪಟ್ಟು ಮಂದಿ ಗುಣಮುಖರಾಗಿದ್ದಾರೆ. ಅಂದರೆ, ರಾಜ್ಯದಲ್ಲಿ ಇಂದು 42,444 ಜನ ಸೋಂಕಿತರು ಪೂರ್ಣ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದುವರೆಗೆ ರಾಜ್ಯದಲ್ಲಿ 21,89,064 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 3,50,066 ಸಕ್ರಿಯ ಪ್ರಕರಣಗಳಿವೆ. ಇಂದು 492 ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 28,298 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಶೇ.2.38ಕ್ಕೆ ಏರಿಕೆಯಾದ ಸೋಂಕಿತರ ಮರಣ ಪ್ರಮಾಣ
ಎರಡನೇ ಅಲೆಯಲ್ಲಿ ಸೋಂಕು ಪತ್ತೆ ಪ್ರಮಾಣ ಶೇ.30ಕ್ಕಿಂತಲೂ ಹೆಚ್ಚಿತ್ತು. ಆದರೆ, ಇತ್ತೀಚೆಗೆ ಕೊಂಚ ಇಳಿಕೆಯಾಗಿದ್ದು, ಶನಿವಾರ ಸೋಂಕು ಪತ್ತೆ ಪ್ರಮಾಣ ಶೇ.14.95ರಷ್ಟಿದೆ. ಅಂದರೆ ಪರೀಕ್ಷೆಗೆ ಒಳಪಡುತ್ತಿರುವ ಪ್ರತಿ 100 ಮಂದಿಯಲ್ಲಿ ಸರಾಸರಿ 15 ಮಂದಿಗೆ ಸೋಂಕು ಪತ್ತೆಯಾಗುತ್ತಿದೆ. ಸೋಂಕಿನಿಂದ ಸಂಭವಿಸುವ ಮರಣ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಶನಿವಾರ ಸೋಂಕಿನಿಂದಾದ ಮರಣ ಹೊಂದುವವರ ಪ್ರಮಾಣ ಶೇ. 2.38ಕ್ಕೆ ಹೆಚ್ಚಿದೆ.

ಬೆಂಗಳೂರಲ್ಲಿ 21.5 ಸಾವಿರ ಪ್ರಕರಣ
ಬೆಂಗಳೂರಿನಲ್ಲಿ ಇಂದು 278 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 4889 ಜನರಿಗೆ ಸೋಂಕು ತಗುಲಿದೆ. 1,64,182 ಸಕ್ರಿಯ ಪ್ರಕರಣಗಳು ಇವೆ. ಇವತ್ತು ಬೆಂಗಳೂರಿನಲ್ಲಿ 21,126 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ
ಬಾಗಲಕೋಟೆ-166, ಬಳ್ಳಾರಿ-671, ಬೆಳಗಾವಿ-1027, ಬೆಂಗಳೂರು ಗ್ರಾಮಾಂತರ-557, ಬೆಂಗಳೂರು ನಗರ- 4889, ಬೀದರ್-42, ಚಾಮರಾಜನಗರ- 365, ಚಿಕ್ಕಬಳ್ಳಾಪುರ-438, ಚಿಕ್ಕಮಗಳೂರು-843, ಚಿತ್ರದುರ್ಗ-763, ದಕ್ಷಿಣ ಕನ್ನಡ-923, ದಾವಣಗೆರೆ-449, ಧಾರವಾಡ-519, ಗದಗ-307, ಹಾಸನ-1024, ಹಾವೇರಿ-194, ಕಲಬುರಗಿ-107, ಕೊಡಗು-333, ಕೋಲಾರ-684, ಕೊಪ್ಪಳ-350, ಮಂಡ್ಯ-453, ಮೈಸೂರು- 1720, ರಾಯಚೂರು-340, ರಾಮನಗರ-181, ಶಿವಮೊಗ್ಗ-672, ತುಮಕೂರು- 1102, ಉಡುಪಿ-684, ಉತ್ತರ ಕನ್ನಡ -536, ವಿಜಯಪುರ-210, ಯಾದಗಿರಿ-83.

LEAVE A REPLY

Please enter your comment!
Please enter your name here