ಮೀಟೂ ಆರೋಪ, ‘ಮಿಲನ’ ನಟಿ ಪಾರ್ವತಿ ಪ್ರಶ್ನೆ ನಂತರ ಪ್ರಶಸ್ತಿ ಹಿಂತಿರುಗಿಸಲು ಮುಂದಾದ ವೈರಮುತ್ತು!

0
7
ಗೀತರಚನೆಕಾರ ಅವರಿಗೆ ಪ್ರತಿಷ್ಠಿತ ONV Cultural Academy ಕಡೆಯಿಂದ ONV Kurup ಪ್ರಶಸ್ತಿ ನೀಡಲಾಗಿತ್ತು. ಮೀಟೂ ಆರೋಪ ಹೊಂದಿರುವ ವೈರಮುತ್ತು ಅವರಿಗೆ ಯಾಕೆ ಈ ಪ್ರಶಸ್ತಿ ನೀಡಿದಿರಿ ಎಂದು ಕೆಲ ಸೆಲೆಬ್ರಿಟಿಗಳು, ಜನರು ಪ್ರಶ್ನೆ ಮಾಡಿದ್ದರು. ಈ ಎಲ್ಲ ಬೆಳವಣಿಗೆ ನೋಡಿದ ನಂತರದಲ್ಲಿ ವೈರಮುತ್ತು ಅವರು ಪ್ರಶಸ್ತಿಯನ್ನು ಹಿಂತಿರುಗಿಸಲಿದ್ದಾರಂತೆ.

ಪ್ರಶಸ್ತಿ ಸ್ಕೀಕರಿಸೋದಿಲ್ಲ ಎಂದ ವೈರಮುತ್ತು
“ಕೇರಳದ ಪ್ರತಿಷ್ಠಿತ ONV Cultural Academy ನನಗೆ ONV Kurup ಕೊಟ್ಟು ಗೌರವಿಸುವುದು ಅಂತ ಹೇಳಿದೆ. ನಾನು ಅವರಿಗೆ ಧನ್ಯವಾದ ಹೇಳುವೆ. ಅವರ ನಿರ್ಣಯವನ್ನು ಸ್ವಾಗತಿಸುವೆ. ಕೆಲವರ ಮಾತುಗಳನ್ನು ಕೇಳಿ ಅವರು ನನಗೆ ಪ್ರಶಸ್ತಿ ನೀಡುವ ಕುರಿತು ಮರುಪರೀಕ್ಷೆ ಮಾಡಲಿದ್ದಾರೆ ಎಂದು ತಿಳಿಯಿತು. ನನ್ನನ್ನು ಹಾಗೂ ಕವಿ ಕುರುಪ್ ಅವರನ್ನು ಮುಜುಗರಕ್ಕೀಡಾಗುವಂತೆ ಮಾಡುವುದು ಎಂದು ನನಗೆ ಅನಿಸುವುದು. ಕಾಂಟ್ರವರ್ಸಿಗಳ ಮಧ್ಯೆ ಈ ಪ್ರಶಸ್ತಿ ನಾನು ಸ್ವೀಕರಿಸೋದಿಲ್ಲ. ನಾನು ಪ್ರಾಮಾಣಿಕ. ನನ್ನ ಸತ್ಯದ ಬಗ್ಗೆ ಯಾರೂ ಏನೂ ಸ್ಪಷ್ಟನೆ ನೀಡಬೇಕಾಗಿಲ್ಲ” ಎಂದು ವೈರಮುತ್ತು ಹೇಳಿದ್ದಾರೆ.

ಸಿಎಂ ಪರಿಹಾರ ನಿಧಿಗೆ ಪ್ರಶಸ್ತಿ ಹಣ ನೀಡಿ
“ನಾನು ONV Kurup ಪ್ರಶಸ್ತಿಯನ್ನು ONV Cultural Academyಗೆ ಕೊಡುವೆ. ಈ ಪ್ರಶಸ್ತಿಯ ಹಣದ ಮೊತ್ತ 3 ಲಕ್ಷ ರೂಪಾಯಿಯನ್ನು ಸಿಎಂ ಪರಿಹಾರ ನಿಧಿಗೆ ನೀಡಿ ಅಂತ ನಾನು ಮನವಿ ಮಾಡುವೆ. ಕೇರಳ, ಮಲಯಾಳಂನವರಿಗೆ ಧನ್ಯವಾದಗಳು, ನಾನು ವೈಯಕ್ತಿಕವಾಗಿ ಕೇರಳ ಸಿಎಂ ಪರಿಹಾರ ನಿಧಿಗೆ 2 ಲಕ್ಷ ರೂಪಾಯಿ ನೀಡುವೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಧನ್ಯವಾದ ತಿಳಿಸುವೆ. ಈ ಪ್ರಶಸ್ತಿ ಸಿಕ್ಕ ನಂತರ ಮುಕ್ತ ಮನಸ್ಸಿನಿಂದ ಹಾರೈಸಿದ ಎಲ್ಲ ತಮಿಳಿಗರಿಗೆ ಧನ್ಯವಾದಗಳು” ಎಂದು ವೈರಮುತ್ತು ಹೇಳಿದ್ದಾರೆ.

ವೈರಮುತ್ತು ಮೇಲೆ 17 ಮಹಿಳೆಯರು ಆರೋಪ
2018ರಲ್ಲಿ ಭಾರೀ ಪ್ರಚಲಿತದಲ್ಲಿದ್ದ ಮೀಟೂ ಅಭಿಯಾನದಲ್ಲಿ ಗಾಯಕಿ ಚಿನ್ಮಯಿ ಶ್ರೀಪಾದ್ ಸೇರಿ 17 ಮಹಿಳೆಯರು ವೈರಮುತ್ತು ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ ಸಿನಿಮಾ ನಟಿ ಕೂಡ ಮೀಟೂ ಆರೋಪವಿರುವ ವ್ಯಕ್ತಿಗೆ ಯಾಕೆ ಪ್ರಶಸ್ತಿ ನೀಡುವಿರಿ ಎಂದು ಪ್ರಶ್ನೆ ಮಾಡಿದ್ದರು.

LEAVE A REPLY

Please enter your comment!
Please enter your name here