ಸಾಯುವ ಭೀತಿ ನಿರೀಕ್ಷಣಾ ಜಾಮೀನು ಪಡೆಯಲು ಸೂಕ್ತ ಕಾರಣವಾಗಲಾರದು: ಸುಪ್ರೀಂಕೋರ್ಟ್

0
5
ಹೊಸದಿಲ್ಲಿ: ಕೋವಿಡ್ 19ರಿಂದ ಸಾಯುವ ಭೀತಿ ಇದೆ ಎಂಬ ಕಾರಣಕ್ಕೆ ನೀಡಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಈ ಸಂಬಂಧ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಮಧ್ಯಾಹ್ನ ತಡೆ ನೀಡಿದೆ.

ನಿರೀಕ್ಷಣಾ ಜಾಮೀನು ಎನ್ನುವುದು ಪ್ರತಿ ವೈಯಕ್ತಿಕ ಪ್ರಕರಣಗಳ ಅರ್ಹತೆಗಳಿಗೆ ಅನುಗುಣವಾಗಿ ಇರಬೇಕು ಎಂದು ಒತ್ತಿ ಹೇಳಿದ ಸುಪ್ರೀಂಕೋರ್ಟ್, ಹೈಕೋರ್ಟ್‌ನ ಆದೇಶವನ್ನು ಉಳಿದ ನ್ಯಾಯಾಲಯಗಳು ಪೂರ್ವನಿರ್ದರ್ಶನವನ್ನಾಗಿ ಬಳಸಿಕೊಳ್ಳಬಾರದು ಎಂದು ಹೇಳಿದೆ.

ಕೋವಿಡ್ ಪ್ರಕರಣಗಳ ಹೆಚ್ಚಳ ಹಾಗೂ ಜೈಲುಗಳು ಕೈದಿಗಳಿಂದ ತುಂಬಿಕೊಂಡಿರುವ ಸಂದರ್ಭದಲ್ಲಿ ಸಾವಿನ ಭಯದ ಹಿನ್ನೆಲೆಯಲ್ಲಿ ಕೂಡ ಎಲ್ಲ ವ್ಯಕ್ತಿಗಳಿಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು ಎಂದು ಅಲಹಾಬಾದ್ ಹೈಕೋರ್ಟ್ ಕಳೆದ ವಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಹಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿ ಸುಮಾರು 130 ಪ್ರಕರಣಗಳನ್ನು ಎದುರಿಸುತ್ತಿದ್ದ ಪ್ರತೀಕ್ ಜೈನ್ ಎಂಬ ವ್ಯಕ್ತಿಗೆ 2022ರ ಜನವರಿಯವರೆಗೂ ಜಾಮೀನಿನ ಮೇಲೆ ಹೊರಗಿರಲು ಅವಕಾಶ ನೀಡಿ ಹೈಕೋರ್ಟ್ ನೀಡಿದ್ದ ಆದೇಶದ ಬಳಿಕ ನಿರೀಕ್ಷಣಾ ಜಾಮೀನಿನ ವಿವಾದ ಸೃಷ್ಟಿಯಾಗಿತ್ತು.

ಕೋವಿಡ್ ಕಾರಣದಿಂದ ಬಂಧನದಿಂದ ಬಿಡುಗಡೆ ನೀಡುವುದು ಕೆಟ್ಟ ನಿದರ್ಶನ ಸೃಷ್ಟಿಸಿದೆ. ನಿರೀಕ್ಷಣಾ ಜಾಮೀನು ನೀಡಲು ಇತರೆ ಕೋರ್ಟ್‌ಗಳು ಈ ತೀರ್ಪನ್ನು ಉಸಾಹರಣೆಯಾಗಿ ತೆಗೆದುಕೊಳ್ಳುತ್ತಿವೆ ಎಂದು ಉತ್ತರ ಪ್ರದೇಶ ಸರ್ಕಾರ ವಾದಿಸಿತ್ತು.

LEAVE A REPLY

Please enter your comment!
Please enter your name here