ನೈತಿಕವಾಗಿ ಮತ್ತು ಸಾಮಾಜಿಕವಾಗಿ ಲಿವ್ ಇನ್ ರಿಲೇಷನ್‌ಶಿಪ್ ಒಪ್ಪುವಂತಹದ್ದಲ್ಲ: ಹೈಕೋರ್ಟ್

0
6
ಚಂಡೀಗಡ: ಸಹಬಾಳ್ವೆ () ನೈತಿಕವಾಗಿ ಹಾಗೂ ಸಾಮಾಜಿಕವಾಗಿ ಒಪ್ಪುವಂತಹದ್ದಲ್ಲ ಎಂದು ಪಂಜಾಬ್ ಮತ್ತು ಹರ್ಯಾಣ ಹೇಳಿದೆ. ಓಡಿಹೋಗಿ ಜತೆಯಾಗಿ ಬಾಳುತ್ತಿದ್ದ ಜೋಡಿಯೊಂದು ರಕ್ಷಣೆಗಾಗಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಅರ್ಜಿದಾರರಾದ ಗುಲ್ಜಾ ಕುಮಾರಿ (19) ಮತ್ತು ಗುರ್ವಿಂದರ್ ಸಿಂಗ್ (22) ಇಬ್ಬರೂ ಜತೆಯಾಗಿ ವಾಸಿಸುತ್ತಿದ್ದು, ಶೀಘ್ರದಲ್ಲಿಯೇ ಮದುವೆಯಾಗಲು ಬಯಸಿದ್ದಾಗಿ ಅರ್ಜಿಯಲ್ಲಿ ತಿಳಿಸಿದ್ದರು. ಕುಮಾರಿಯ ಪೋಷಕರಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದರು.

ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ಗಮನಿಸಿದರೆ ಪ್ರಸ್ತುತ ಅವರು ತಮ್ಮ ಲಿವ್ ಇನ್ ರಿಲೇಷನ್‌ಶಿಪ್ ಸಂಬಂಧಕ್ಕೆ ಒಪ್ಪಿಗೆಯ ಮುದ್ರೆ ಕೋರುತ್ತಿರುವಂತಿದೆ. ಇದು ನೈತಿಕವಾಗಿ ಮತ್ತು ಸಾಮಾಜಿಕವಾಗಿ ಒಪ್ಪತಕ್ಕದಲ್ಲ. ಹೀಗಾಗಿ ಈ ಅರ್ಜಿಯಂತೆ ಯಾವುದೇ ರಕ್ಷಣೆ ಆದೇಶ ನೀಡಲು ಸಾಧ್ಯವಿಲ್ಲ. ಈ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಮೂರ್ತಿ ಎಚ್ಎಸ್ ಮದಾನ್ ಆದೇಶದಲ್ಲಿ ತಿಳಿಸಿದ್ದಾರೆ.

ಸಿಂಗ್ ಮತ್ತು ಕುಮಾರಿ ಇಬ್ಬರೂ ತರ್ನ್ ತರನ್ ಜಿಲ್ಲೆಯಲ್ಲಿ ಜತೆಯಾಗಿ ವಾಸಿಸುತ್ತಿದ್ದರು. ಅವರ ಸಂಬಂಧಕ್ಕೆ ಲೂಧಿಯಾನದಲ್ಲಿರುವ ಕುಮಾರಿ ಪೋಷಕರು ಒಪ್ಪಿಗೆ ನೀಡಿರಲಿಲ್ಲ ಎಂದು ಅರ್ಜಿದಾರರ ಪರ ವಕೀಲ ಜೆಎಸ್ ಠಾಕೂರ್ ಮಾಹಿತಿ ನೀಡಿದ್ದರು.

ಕುಮಾರಿಯ ವಯಸ್ಸಿನ ಮಾಹಿತಿ ನೀಡುವ ಎಲ್ಲ ದಾಖಲೆಗಳೂ ಆಕೆಯ ಮನೆಯವರ ವಶದಲ್ಲಿ ಇರುವುದರಿಂದ ಮದುವೆಯಾಗಲು ಸಾಧ್ಯವಾಗಿರಲಿಲ್ಲ ಎಂದು ವಕೀಲರು ಹೇಳಿದ್ದರು. ಆದರೆ ಇದನ್ನು ಕೋರ್ಟ್ ಒಪ್ಪಿಕೊಂಡಿಲ್ಲ.

LEAVE A REPLY

Please enter your comment!
Please enter your name here