ರಘು ಗೌಡ ಪತ್ನಿ ಕೈಯಲ್ಲಿ ಸೌಟು & ಲಟ್ಟಣಿಗೆ! ‘ವೈನ್ ಸ್ಟೋರ್’ ಹುಡುಗನಿಗೆ ಏನಾಗೋಯ್ತು?

0
6
ಮನೆಗೂ ಹೋಗೋಕೆ ಮುಂಚೆಯೇ ಸೋಶಿಯಲ್ ಮೀಡಿಯಾದಲ್ಲಿ ಅಲಿಯಾಸ್ ರಾಘವೇಂದ್ರ ಸಖತ್ ಫೇಮಸ್‌ ಆಗಿದ್ದರು. ತಮ್ಮದೇ ‘ರಘು ವೈನ್‌ ಸ್ಟೋರ್’ ಯೂಟ್ಯೂಬ್‌ ಚಾನೆಲ್‌ ಮೂಲಕ ಕಾಮಿಡಿ ವಿಡಿಯೋಗಳನ್ನು ಮಾಡಿ ಎಲ್ಲರನ್ನೂ ನಗಿಸಿದ್ದರು. ಬಿಗ್ ಬಾಸ್ ಮನೆಯಲ್ಲೂ ರಘು ಸಖತ್ ಆಗಿಯೇ ಮಿಂಚಿದ್ದರು. ಆದರೆ, ಅವರು ಅಲ್ಲಿ ವೈಷ್ಣವಿ ಗೌಡ ಜೊತೆ ಹೆಚ್ಚು ಸ್ನೇಹವನ್ನು ಹೊಂದಿದ್ದರು. ಅದನ್ನು ಇತರೆ ಸ್ಪರ್ಧಿಗಳು ಕಾಲೆಳೆಯುತ್ತಿದ್ದರು. ‘ಮನೆಗೆ ಹೋದ್ಮೇಲೆ ನಿಂಗೆ ಇದೆ’ ಎಂದೆಲ್ಲ ರೇಗಿಸಿದ್ದರು. ಇದೀಗ ಅದಕ್ಕೆ ಸರಿಯಾಗಿ ಒಂದು ಫೋಟೋವನ್ನು ರಘು ಶೇರ್ ಮಾಡಿಕೊಂಡಿದ್ದಾರೆ.

ಲಟ್ಟಣಿಗೆಯಿಂದ ಹೊಡೆದ್ರ ರಘು ಪತ್ನಿ?
ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ರಘು ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರ ಮುಖದ ಮೇಲೆಲ್ಲ ಗಾಯವಾದಂತೆ ಇದೆ. ರಘು ಪಕ್ಕದಲ್ಲಿ ಅವರ ಪತ್ನಿ ಕೂಡ ಇದ್ದಾರೆ. ಆದರೆ, ಅವರ ಕೈಯಲ್ಲಿ ಸೌಟು ಮತ್ತು ಲಟ್ಟಣಿಗೆ ಸಹ ಇದೆ! ಇದನ್ನು ನೋಡಿದವರು, ‘ರಘು ಮನೆಗೆ ಹೋದ್ಮೇಲೆ ಸರಿಯಾಗಿಯೇ ಏಟು ತಿಂದಿರುವಂತಿದೆ’ ಎಂದು ಒಂದು ಕ್ಷಣ ಅಚ್ಚರಿಪಟ್ಟಿದ್ದಾರೆ ಕೂಡ. ಆದರೆ, ರಘು ಈ ಫೋಟೋವನ್ನು ತಮಾಷೆಗಾಗಿ ಹಂಚಿಕೊಂಡಿದ್ದಾರೆ. ಜೊತೆಗೆ, ‘ಎಲ್ಲರಿಗೂ ಹಾಯ್‌.. ನಾನು ವಾಪಸ್ ಬಂದಿದ್ದೇನೆ. ಸುರಕ್ಷಿತವಾಗಿದ್ದೇನೆ. ಧನ್ಯವಾದಗಳು ದೇವರೇ, ವಿದ್ಯಾ ಎಲ್ಲವನ್ನೂ ಸ್ಪೋರ್ಟಿವ್ ಆಗಿ ತೆಗೆದುಕೊಂಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಮಜಾ ಮಾಡ್ಕೊಂಡು ಬನ್ನಿ ಎಂದಿದ್ದ ವಿದ್ಯಾ!
ಮನೆಯೊಳಗೆ ಒಮ್ಮೆ ರಘು ಕ್ಯಾಪ್ಟನ್ ಆಗಿದ್ದರು. ಆಗ ಅವರ ಪತ್ನಿ ವಿದ್ಯಾಶ್ರೀ ಅವರ ವಾಯ್ಸ್ ಕ್ಲಿಪ್‌ ಅನ್ನು ಬಿಗ್ ಬಾಸ್ ಕೇಳಿಸಿದ್ದರು. ಅದರಲ್ಲಿ ಮಾತನಾಡಿದ್ದ ವಿದ್ಯಾಶ್ರೀ, ‘ಕ್ಯಾಪ್ಟನ್ ಆಗಿ ಎಲ್ಲ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸು. ಕಿಚ್ಚನ ಚಪ್ಪಾಳೆ ಬಂದಿದ್ದು ನಮಗೆಲ್ಲರಿಗೂ ತುಂಬ ಖುಷಿ ಆಯ್ತು. ಹೀಗೆ ಸದಾ ಚೆನ್ನಾಗಿ ಆಡ್ತಾ ಇರು. ನಿಂಗೆ ಆ ಸಾಮರ್ಥ್ಯ ಇದೆ. ನಿನ್ ಕೈಯಲ್ಲಿ ಎಲ್ಲ ಗೇಮ್‌ನೂ ಆಡೋಕೆ ಸಾಧ್ಯ. ಆಡ್ತೀಯಾ ನೀನು, ಆಡು. ನಿನ್‌ ಜೊತೆ ಜಗಳ ಆಡೋದು, ಮಾತನಾಡೋದು, ರೇಗಿಸೋದು, ಓಡಾಡೋದು ಎಲ್ಲ ಮಿಸ್ ಮಾಡ್ಕೋತಾ ಇದ್ದೀನಿ. ಬಟ್ ಪರವಾಗಿಲ್ಲ. ನಿನ್ನ ಫಿನಾಲೆಯಲ್ಲಿ ನೋಡುವುದಕ್ಕೆ ಕಾಯ್ತಾ ಇದ್ದೇನೆ’ ಎಂದು ಹೇಳಿದ್ದರು.

ಕೊನೆಗೆ, ‘ನಾನೆಲ್ಲದನ್ನೂ ಸ್ಪೋರ್ಟಿವ್ ಆಗಿ ತೆಗೆದುಕೊಳ್ಳುತ್ತ ಇದ್ದೇನೆ. ನಿಮ್ಮೆಲ್ಲ ಕ್ಯಾರೆಕ್ಟರ್‌ಗಳನ್ನು ಈಚೆಗೆ ತಗೊಂಡು ಬನ್ನಿ. ಮಜಾ ಮಾಡು, ಆರಾಮಾಗಿರು, ಖುಷಿಯಾಗಿರು.. ಬೇರೆಯವರನ್ನು ಖುಷಿ ಪಡಿಸು, ಮಜಾ ಮಾಡ್ಕೊಂಡು ಬಾ, ಪರವಾಗಿಲ್ಲ. ಲವ್ ಯೂ, ಮಿಸ್ ಯೂ, ನಾನ್ಯಾವತ್ತೂ ನಿಂಗೆ ಇದೆಲ್ಲ ಹೇಳಿಲ್ಲ..’ ಎಂದು ವಿದ್ಯಾಶ್ರೀ ಹೇಳಿದ್ದರು. ಅಂದಿನಿಂದ ರಘುಗೆ ಮನೆಯವರೆಲ್ಲ ಸಖತ್ ಇನ್ನಷ್ಟು ಹೆಚ್ಚು ರೇಗಿಸೋಕೆ ಶುರು ಮಾಡಿದ್ದರು.

LEAVE A REPLY

Please enter your comment!
Please enter your name here